Join WhatsApp Group Join Telegram Group

Swavalanbi Sarati Yojane: ವಾಹನಗಳ ಖರೀದಿಗೆ 3 ಲಕ್ಷದವರೆಗೆ ಸಹಾಯಧನ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

Swavalanbi Sarati Yojane: ವಾಹನಗಳ ಖರೀದಿಗೆ 3 ಲಕ್ಷದವರೆಗೆ ಸಹಾಯಧನ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

ಈಗ ನಮ್ಮ ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಆರ್ಥಿಕ ಏರಿಳಿತಕ್ಕೆ ಈಗ ಸರ್ಕಾರ ನೆರವುಗಳನ್ನು ನಿರಂತರವಾಗಿ ಅವರಿಗೆ ನೀಡುತ್ತಿವೆ. ಅಷ್ಟೇ ಅಲ್ಲದೆ ಈಗ ಇದರಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯು ಕೂಡ ಒಂದು ವಿಶೇಷವಾದಂತಹ ಸ್ಥಾನವನ್ನು ಪಡೆದುಕೊಂಡಿದೆ.

Swavalanbi Sarati Yojane

ಅದೇ ರೀತಿಯಾಗಿ ನಮ್ಮ ಕರ್ನಾಟಕ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಜಾರಿಗೆ ಇರುವಂತಹ ಈ ಒಂದು ಯೋಜನೆಯು ನಿರುದ್ಯೋಗಿ ಯುವಕ ಯುವತಿಯರನ್ನು ಸಾರಿಗೆ ವಲಯದಲ್ಲಿ ಸ್ವಂತ ಉದ್ಯೋಗಕ್ಕೆ ತಳ್ಳುವ ಗುರಿಯನ್ನು ಹೊಂದಿದ್ದು. ಈಗ ಟ್ಯಾಕ್ಸಿ, ಸರಕು ವಾಹನ ಅಥವಾ ಪ್ರಯಾಣಿಕರ ಆಟೋ ರಿಕ್ಷಾವನ್ನು ಖರೀದಿ ಮಾಡಲು 50% ಸಬ್ಸಿಡಿಯನ್ನು ನೀಡಲಾಗುತ್ತಾ ಇದೆ.

ಅಷ್ಟೇ ಅಲ್ಲದೆ ಒಂದು ಯೋಜನೆ ಕೇವಲ ಹಣಕಾಸು ನೆರವಲ್ಲ ಬದಲಿಗೆ ಸಮುದಾಯದ ಯುವಶಕ್ತಿಯನ್ನು ಸಾರಿಗೆ ಕ್ಷೇತ್ರದಲ್ಲಿ ಸ್ಥಿರ ಆದಾಯದ ಮೂಲಕ ಸೇರಿಸುವ ಒಂದು ದೀರ್ಘಕಾಲಿನ ಯೋಜನೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಕೂಡಲೇ ಈಗ ಈ ಒಂದು ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ನೀವು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.

ಯೋಜನೆಯ ಉದ್ದೇಶ ಏನು?

ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವು ಏನೆಂದರೆ ಈಗ ನಮ್ಮ ಸರಕಾರವು ಬಡತನ ನಿರ್ಮೂಲನೆಯ ಭಾಗವಾಗಿದ್ದು. ಈಗ ಈ ಒಂದು ಯೋಜನೆ ಮೂಲಕ ಹಲವು ಗುರಿಗಳನ್ನು ಈಗ ಒಳಗೊಂಡಿದೆ ಅದೇ ರೀತಿಯಾಗಿ ಈಗ ವಾಹನ ಖರೀದಿಯ ಹಣಕಾಸು ಭಾರವನ್ನು ಕಡಿಮೆ ಮಾಡಿ. ಸಾಮಾನ್ಯ ಜನರಿಗೆ ಈಗ ಸುಲಭವಾಗಿ ಉದ್ಯೋಗವನ್ನು ಪ್ರಾರಂಭ ಮಾಡಲು ಈ ಒಂದು ಯೋಜನೆಯ ಅವಕಾಶವನ್ನು ನೀಡುತ್ತದೆ.

ಅದೇ ರೀತಿಯಾಗಿ ಈಗ ಆಟೋ, ಟ್ಯಾಕ್ಸಿ ಮತ್ತು ಸರಕು ವಾಹನಗಳ ಮೂಲಕ ಸ್ವಯಂ ಉದ್ಯೋಗವನ್ನು ಸೂಚಿಸಿ ನಿರುದ್ಯೋಗ ಸಮಸ್ಯೆಗಳನ್ನು ಎದುರಿಸುತ್ತಿರುವುದಕ್ಕೆ ಈ ಒಂದು ಯೋಜನೆ ಸಹಾಯ ಮಾಡುತ್ತದೆ. ಅದೇ ರೀತಿಯಾಗಿ ಈ ಒಂದು ಯೋಜನೆ ಮೂಲಕ ಸಬ್ಸಿಡಿ ವಾಹನ ಒಟ್ಟು ವೆಚ್ಚವನ್ನು ಕಡಿಮೆಗೊಳಿಸಿ ವ್ಯವಹಾರವನ್ನು ಆರಂಭ ಮಾಡಲು ಸರಳವಾದ ದಾರಿಯನ್ನು ನೀಡುತ್ತದೆ.

ಅರ್ಹತೆಗಳು ಏನು?

  • ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು ಆಗಿರಬೇಕು.
  • ಆನಂತರ ಅವರ ವಯಸ್ಸು 18ರಿಂದ 55 ವರ್ಷದ ಒಳಗೆ ಇರಬೇಕು.
  • ಹಾಗೆ ಅವರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ತದನಂತರ ಅವರ ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಹಾಗೆ ಕುಟುಂಬದ ಯಾವುದೇ ಒಬ್ಬ ಸದಸ್ಯರು ಕೂಡ ಈಗ ರಾಜ್ಯ ಸರ್ಕಾರ ಅಗಲೀ ಕೇಂದ್ರ ಸರ್ಕಾರದ ಉದ್ಯೋಗಿಗಳು ಆಗಿರಬಾರದು.

ದೊರೆಯುವ ಸಬ್ಸಿಡಿ ಎಷ್ಟು?

ಈಗ ಈ ಒಂದು ಯೋಜನೆಯ ಮೂಲಕ ಈಗ ನೀವೇನಾದರೂ ಸರಕು ವಾಹನ ಅಥವಾ ಟ್ಯಾಕ್ಸಿಯನ್ನು ಖರೀದಿ ವಾಹನದ ಬೆಲೆಗೆ 50% ಅಥವಾ ಗರಿಷ್ಠ 3 ಲಕ್ಷದವರೆಗೆ ಈ ಒಂದು ಯೋಜನೆ ಮೂಲಕ ಸಬ್ಸಿಡಿಯನ್ನು ಪಡೆದುಕೊಳ್ಳಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ವಾಹನದ ದರ ಪಟ್ಟಿ
  • ಸ್ವಯಂ ಘೋಷಣೆ ಪತ್ರ
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  • ಚಾಲನೆ ಪರವಾನಿಗೆ ಪ್ರಮಾಣ ಪತ್ರ
  • ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವುದು ಹೇಗೆ?

  • ಈ ಒಂದು ಯೋಜನೆಗೆ ಈಗ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಈಗ KCDCC ಯ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಬೇಕು.
  • ಆನಂತರ ಅದರಲ್ಲಿ ಸ್ವಾವಲಂಬಿ ಸಾರಥಿ ಯೋಜನೆ ವಿಭಾಗವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು..
  • ಆನಂತರ ಅದರಲ್ಲಿ ನೀವು ಹೊಸದಾಗಿ ಬಳಕೆದಾರರಾಗಿದ್ದರೆ ಮೊಬೈಲ್ ನಂಬರ್ ನ ಮೂಲಕ ನೊಂದಣಿಯನ್ನು ಮಾಡಿಕೊಳ್ಳಿ.
  • ಆನಂತರ ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ. ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ ಮಾಡಿ.
WhatsApp Float Button

Leave a Comment

error: Content is protected !!