Join WhatsApp Group Join Telegram Group

Nati Koli Shed Subsidy Scheme: ಉಚಿತ ಕೋಳಿ ಮರಿ ಶೆಡ್ ನಿರ್ಮಾಣಕ್ಕೆ ಈಗ 25,000 ದವರೆಗೆ ಆರ್ಥಿಕ ಸಹಾಯಧನ! 

Nati Koli Shed Subsidy Scheme: ಉಚಿತ ಕೋಳಿ ಮರಿ ಶೆಡ್ ನಿರ್ಮಾಣಕ್ಕೆ ಈಗ 25,000 ದವರೆಗೆ ಆರ್ಥಿಕ ಸಹಾಯಧನ! 

ಈಗ ನಮ್ಮ ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಆರ್ಥಿಕ ಸಬಲೀಕರಣದ ಒಂದು ಮಹತ್ವದ ದಾರಿ ಅಂದರೆ ಇದಾಗಿದೆ .ಈಗ ಕೃಷಿ ಮತ್ತು ಸಣ್ಣ ಉದ್ಯಮಗಳ ಮೂಲಕ ಅವರನ್ನು ಉದ್ಯಮಿಗೊಳಿಸುವುದು ಇಂದಿನ ಅಗತ್ಯವಾದ ಅಂತಹ ಮಾಹಿತಿ ಎಂದು ಹೇಳಬಹುದು.

Nati Koli Shed Subsidy Scheme

ಅದೇ ರೀತಿಯಾಗಿ ಇದರಲ್ಲಿ ಈಗ ಕೋಳಿ ಸಾಕಾಣಿಕೆಯು ಒಂದು ಸರಳ ಲಾಭದಾಯಕ ಮಾರ್ಗವಾಗಿ ಮೂಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ನಾಟಿ ಕೋಳಿಗಳ ಮೊಟ್ಟೆಗಳು ಮತ್ತು ಮಾಂಸಕ್ಕೆ ಸ್ಥಳೀಯ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದೆ. ಅದೇ ರೀತಿಯಾಗಿ ಇದು ಪೌಷ್ಟಿಕತೆಯನ್ನು ಹೆಚ್ಚಿಸುತ್ತದೆ ಮತ್ತು ಆದಾಯವನ್ನು ಸ್ಥಿರವಾದ ರೀತಿಯಲ್ಲಿ ನೀಡುತ್ತಾ ಇರುತ್ತದೆ.

ಈಗ ಈ ಒಂದು ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ 2024 25 ರ ಬಜೆಟ್ಟಿನಲ್ಲಿ ಘೋಷಿಸಿದಂತಹ ಕುಕ್ಕುಂಟು ಸಂಜೀವಿನಿ ಯೋಜನೆಯ ಜಾರಿಗೆ ಮಾಡಿದ್ದು. ಈಗ ಈ ಒಂದು ಯೋಜನೆಯು ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಮಹಿಳೆಯರನ್ನು ಕೋಳಿ ಸಾಕಾಣಿಕೆ ಅತ್ತ ಗಮನವನ್ನು ಸೆಳೆಯುವ ಉದ್ದೇಶ ಇದರಾಗಿದೆ.

ಈಗ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈಗ ಲಾಭವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ಈ ಒಂದು ಲೇಖನದಲ್ಲಿ ನೀವು ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಏಕೆಂದರೆ ಇದರಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಬೇಕಾಗುವ ದಾಖಲೆಗಳು ಏನು ಹಾಗೂ ಯಾವ ರೀತಿಯ ಅರ್ಜಿ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇದೆ.

ಈ ಯೋಜನೆಯ ಮಾಹಿತಿ

ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವು ಏನೆಂದರೆ ಈಗ ಇನ್ನೊಂದು ಮಹಿಳೆಯರಿಗೆ ಆರ್ಥಿಕವಾಗಿ ಬೆಂಬಲವನ್ನು ನೀಡುವಂತಹ ಯೋಜನೆ ಇದಾಗಿದೆ. ಈ ಒಂದು ಯೋಜನೆ ಈಗ ಪಶು ಸಂಗೋಪನೆ ಇಲಾಖೆಯಿಂದ ಉತ್ತಮ ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ಮತ್ತು ಕಡಿಮೆ ದರದಲ್ಲಿ ಈಗ ವಿತರಿಸಲಾಗುತ್ತದೆ.

ಅದೇ ರೀತಿಯಾಗಿ ಈ ಒಂದು ಕೋಳಿಗಳಿಂದ ಕಡಿಮೆ ನಿರ್ವಹಣೆಗೆ ಸೂಕ್ತವಾಗಿದೆ ಮತ್ತು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ ಮತ್ತು ಉನ್ನತ ಮೊಟ್ಟೆಯನ್ನು ನೀಡಿ. ಹೆಚ್ಚಿನ ಆದಾಯವನ್ನು ನೀಡುವಲ್ಲಿ ಈ ಒಂದು ಕೋಳಿ ಮರಿಗಳು ಈಗ ಸಹಾಯವನ್ನು ಮಾಡುತ್ತವೆ.

ಅದೇ ರೀತಿಯಾಗಿ ಈ ಒಂದು ಯೋಜನೆ ಅಡಿಯಲ್ಲಿ ಈಗ ನೀವು ಕೋಳಿ ಶೆಡ್ ನಿರ್ಮಾಣಕ್ಕೆ ಆರ್ಥಿಕ ನೆರವನ್ನು ಈಗ ಪಡೆದುಕೊಳ್ಳಬಹುದು. ಈಗ ಈ ಒಂದು ಯೋಜನೆ ಅಡಿಯಲ್ಲಿ 25,000ವರೆಗೆ ಆರ್ಥಿಕ ಸಹಾಯ ಧನವನ್ನು ಪಡೆದುಕೊಳ್ಳಬಹುದು.

ಅರ್ಹತೆಗಳು ಏನು?

  • ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಈಗ ಕಡ್ಡಾಯವಾಗಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಆಗಿರಬೇಕು.
  • ಒಂದು ಸಂಘದಲ್ಲಿ 5 ರಿಂದ 10 ಜನ ಸದಸ್ಯರು ಇರಬೇಕು.
  • ಹಾಗೆ ಕೋಳಿ ಸಾಕಾಣಿಕೆಗೆ  ಆಸಕ್ತಿ ಮತ್ತು ಆರಂಭಿಕ ಅನುಭವವಿದ್ದರೆ ಮೊದಲ ಆದ್ಯತೆ ನೀಡಲಾಗುತ್ತದೆ.
  • ಹಾಗೆ ಅವರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
  • ಆನಂತರ ಅವರು ಗ್ರಾಮದಲ್ಲಿ ಜಮೀನನ್ನು ಹೊಂದಿರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ಮೊಬೈಲ್ ನಂಬರ್
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ನಿಮ್ಮ ತಾಲೂಕು ಪಶು ಆಸ್ಪತ್ರೆ ಅಥವಾ ಪಶು ಸಂಗೋಪನ ಇಲಾಖೆಗೆ ಭೇಟಿಯನ್ನು ನೀಡಿ ಅಲ್ಲಿ ಕುಕ್ಕುಟು ಸಂಜೀವಿನಿ ಅರ್ಜಿ ಫಾರ್ಮನ್ನು ತೆಗೆದುಕೊಂಡು ಅದಕ್ಕೆ ಬೇಕಾಗುವಂತಹ ಪ್ರತಿಯೊಂದು ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ಉಚಿತ ಕೋಳಿ ಮರಿಗಳನ್ನು ಪಡೆಯಬಹುದು.

WhatsApp Float Button

Leave a Comment

error: Content is protected !!