How To Apply Birth Certificate: ಜನನ ಪ್ರಮಾಣ ಪತ್ರ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.
ಇನ್ನು ಮುಂದೆ ನಮ್ಮ ರಾಜ್ಯದಲ್ಲಿ ಜನನ ಪ್ರಮಾಣ ಪತ್ರಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಇನ್ನೂ ಮುಂದೆ ಸರಳ ಮತ್ತು ಸುಲಭವಾಗಿ ಪ್ರಕ್ರಿಯೆಯಾಗಿದೆ. ಈಗ ಜನನ ಪ್ರಮಾಣ ಪತ್ರವು ಯಾವುದೇ ವ್ಯಕ್ತಿಯ ಜೀವನದ ಮೊದಲ ಮತ್ತು ಅತ್ಯಂತ ಮುಖ್ಯವಾದ ದಾಖಲೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅಷ್ಟೇ ಅಲ್ಲದೆ ಈಗ ಶಾಲಾ ಪ್ರವೇಶ ಆಗಿರಬಹುದು. ಆಧಾರ್ ಕಾರ್ಡ್ ತಯಾರಿ ಹಾಗೂ ಪಾಸ್ ಪೋರ್ಟ್ ಅರ್ಜಿ ಇಲ್ಲವೇ ಸರಕಾರ ಯೋಜನೆಗಳ ಲಾಭಗಳನ್ನು ಪಡೆಯುವುದು. ಈ ಒಂದು ಎಲ್ಲಾ ಕಾರ್ಡ್ ಗಳನ್ನು ಪಡೆದುಕೊಳ್ಳಬೇಕೆಂದರೆ ಈಗ ಈ ಒಂದು ಜನನ ದಾಖಲೆ ಬಹುಮುಖ್ಯ ದಾಖಲೆಯಾಗಿದೆ. ಹಾಗೆ ನಮ್ಮ ಕರ್ನಾಟಕದಲ್ಲಿ ಇಂದು ಈ ಒಂದು ಪ್ರಮಾಣ ಪತ್ರವನ್ನು ಪಡೆಯುವುದು ತುಂಬಾ ಸುಲಭವಾಗಿದ್ದು. ಇನ್ನು ಮುಂದೆ ಮನೆಯಲ್ಲಿ ಕುಳಿತು ಈಗ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಅಷ್ಟೇ ಅಲ್ಲದೆ ಈಗ ಸರ್ಕಾರವು ಈ ಜನನ ಪೋರ್ಟಲ್ ಅಥವಾ ಸೇವಾಸಿಂದು ಪೋರ್ಟಲ್ ಈ ಒಂದು ಪ್ರಕ್ರಿಯೆಯನ್ನು ಈಗ ಸುಲಭವಾದ ರೀತಿಯಲ್ಲಿ ನಡೆಸುವಂತೆ ಅವಕಾಶವನ್ನು ಮಾಡಿಕೊಟ್ಟಿದೆ. ಅಷ್ಟೇ ಅಲ್ಲದೆ ಈಗ ಮಕ್ಕಳ ಜನನದ ನಂತರ 21 ದಿನದ ಒಳಗೆ ಮಾಡಿದರೆ ಯಾವುದೇ ಶುಲ್ಕವಿಲ್ಲದೆ ನೀವು ಈ ಒಂದು ಜನನ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು. ಈಗ ನೀವು ಕೂಡ ಈ ಒಂದು ಜನನ ಪ್ರಮಾಣ ಪತ್ರ ಪಡೆಯಲು ಏನೆಲ್ಲ ದಾಖಲೆಗಳನ್ನು ನೀಡಬೇಕು ಮತ್ತು ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.
ಜನನ ಪ್ರಮಾಣ ಪತ್ರದ ಮಹತ್ವ
ಈಗ ಈ ಒಂದು ಜನನ ಪ್ರಮಾಣ ಪತ್ರವು ಮಕ್ಕಳ ಜನನದ ಅಧಿಕೃತ ಸಾಕ್ಷಿಯಾಗಿದ್ದು. ಇದರಲ್ಲಿ ಮಕ್ಕಳ ಹೆಸರು, ಜನನ ದಿನಾಂಕ ಸ್ಥಳ, ಲಿಂಗ, ತಂದೆ-ತಾಯಿಯ ಹೆಸರು ಮತ್ತು ಇತರ ವಿವರಗಳು ದಾಖಲೆ ಆಗಿರುತ್ತದೆ. ಅಷ್ಟೇ ಅಲ್ಲದೆ ಇದು ಕೇವಲ ದಾಖಲೆಯನ್ನು ಬದಲಾಗಿ ಸಮಾಜದಲ್ಲಿ ಹಕ್ಕುಗಳನ್ನು ಬಳಸುವಂತಹ ಮೂಲ ದಾಖಲೆಯಾಗಿದೆ.
ಅದೇ ರೀತಿಯಾಗಿ ಈ ಒಂದು ದಾಖಲೆಗಳನ್ನು ನೀವು ಪಡೆಯದೆ ಇದ್ದರೆ ಮುಂದಿನ ದಿನಮಾನಗಳಲ್ಲಿ ತೊಂದರೆಗಳನ್ನು ಎದುರಿಸಬಹುದು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆನ್ಲೈನ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಈಗ ಈ ಒಂದು ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ 2024 ರಲ್ಲಿ ನಡೆದ ನಿಯಮ ತಿದ್ದುಪಡಿಯ ನಂತರ ಇದು ಹೆಚ್ಚು ಸುಗಮವಾಗಿ ಈಗ ಮುಂದುವರೆದಿದೆ.
ಬೇಕಾಗುವ ದಾಖಲೆಗಳು ಏನು?
- ಪೋಷಕರ ಆ ಧಾರ್ ಕಾರ್ಡ್
- ವೋಟರ್ id
- ಪ್ಯಾನ್ ಕಾರ್ಡ್
- ರೇಷನ್ ಕಾರ್ಡ್
- ಮದುವೆಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಇಮೇಲ್ ಐಡಿ
- ಆಸ್ಪತ್ರೆಯ ದಾಖಲೆಗಳು
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ನಾವು ಈ ಕೆಳಗೆ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ಆನಂತರ ಆ ಒಂದು ಅರ್ಜಿಯಲ್ಲಿ ಕೇಳುವಂತ ಪ್ರತಿಯೊಂದು ಮಾಹಿತಿಗಳನ್ನು ಈಗ ನೀವು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಳ್ಳಿ.
- ನಂತರ ಅದಕ್ಕೆ ಬೇಕಾಗುವಂತ ಅಗತ್ಯ ದಾಖಲೆಗಳನ್ನು ಪಿಡಿಎಫ್ ಅಥವಾ ಜಿಪಿಜಿ ಫಾರ್ಮೆಟ್ ನಲ್ಲಿ ಈಗ ಅಪ್ಲೋಡ್ ಮಾಡಿ.
- ಆನಂತರ ನೀವು ಭರ್ತಿ ಮಾಡಿರುವ ದಾಖಲೆಗಳನ್ನು ಪರಿಶೀಲಿಸಿ ಶುಲ್ಕವನ್ನು ಪಾವತಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
- ನೀವು ಅರ್ಜಿ ಸಲ್ಲಿಸಿದ 15 ದಿನದ ಒಳಗಾಗಿ ನೀವು ಈ ಒಂದು ಜನನ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು.
Praveen is Editor and founder of Kannadamedia.org, a Kannada website stands for news, govt schemes, technology & jobs updates content With 3 years of experience in digital journalism, he is committed to delivering high-quality, reliable, and insightful information.
His goal is to turn our passion for news, govt schemes, technology & jobs updates content into a thriving online resource.
Similarly, in addition to providing good information to people, it is also about giving them a good user experience.
Contact with Praveen
Email ID: praveen@kannadamedia.com