Join WhatsApp Group Join Telegram Group

Airtel New Recharge Plans 2026: ಏರ್ಟೆಲ್ ಗ್ರಾಹಕರಿಗೆ ಕಡಿಮೆ ಬೆಲೆಯ 84 ದಿನಗಳ ರಿಚಾರ್ಜ್ ಪ್ಲಾನ್‌ಗಳು! ಇಲ್ಲಿದೆ  ಸಂಪೂರ್ಣ ಮಾಹಿತಿ

Airtel New Recharge Plans 2026: ಏರ್ಟೆಲ್ ಗ್ರಾಹಕರಿಗೆ ಕಡಿಮೆ ಬೆಲೆಯ 84 ದಿನಗಳ ರಿಚಾರ್ಜ್ ಪ್ಲಾನ್‌ಗಳು! ಇಲ್ಲಿದೆ  ಸಂಪೂರ್ಣ ಮಾಹಿತಿ

ನೀವು ಏರ್ಟೆಲ್ ಸಿಮ್ ಬಳಕೆದಾರರಾಗಿದ್ದೀರಾ? ದಿನನಿತ್ಯ ಕರೆಗಳು, ಇಂಟರ್ನೆಟ್ ಮತ್ತು ದೀರ್ಘಾವಧಿಯ ವ್ಯಾಲಿಡಿಟಿ ಇರುವ ರಿಚಾರ್ಜ್ ಪ್ಲಾನ್ ಹುಡುಕುತ್ತಿದ್ದೀರಾ? ಹಾಗಿದ್ದರೆ ಈಗ ಅನಿಮಗೆ ಇದೊಂದು ಸಿಹಿ ಸುದ್ದಿ. ಈಗ ನಮ್ಮ ಭಾರತದ ಪ್ರಮುಖ ಟೆಲಿಕಾಂ ಕಂಪನಿಯಾದ ಏರ್ಟೆಲ್ ಇದೀಗ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ, ದೀರ್ಘಾವಧಿಯ (84 ದಿನ) ಹೊಸ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಪ್ಲಾನ್‌ಗಳು ಕಡಿಮೆ ಖರ್ಚಿನಲ್ಲಿ ಹೆಚ್ಚು ಸೌಲಭ್ಯ ಪಡೆಯಲು ಬಯಸುವ ಗ್ರಾಹಕರಿಗೆ ಬಹಳ ಉಪಯುಕ್ತವಾಗಿವೆ.

Airtel New Recharge Plans 2026

ಈ ಲೇಖನದ ಮೂಲಕ, ಏರ್ಟೆಲ್‌ನ 84 ದಿನಗಳ ವ್ಯಾಲಿಡಿಟಿ ಇರುವ ರಿಚಾರ್ಜ್ ಪ್ಲಾನ್‌ಗಳ ಬಗ್ಗೆ ಇರುವ ಸೌಲಭ್ಯ ನೀಡುವ ಯೋಜನೆಗಳು,
 ಯಾವ ಪ್ಲಾನ್ ಯಾರಿಗೆ ಸೂಕ್ತ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಏರ್ಟೆಲ್ ರಿಚಾರ್ಜ್ ನ ಮಾಹಿತಿ

ಪ್ರಸ್ತುತ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಏರ್ಟೆಲ್ ಮತ್ತು ರಿಲಯನ್ಸ್ ಜಿಯೋ ಎರಡು ದಿಗ್ಗಜ ಕಂಪನಿಗಳಾಗಿವೆ. ಗ್ರಾಹಕರ ಸಂಖ್ಯೆಯ ಆಧಾರದ ಮೇಲೆ ಏರ್ಟೆಲ್ ಭಾರತದಲ್ಲಿ ಎರಡನೇ ಅತಿ ದೊಡ್ಡ ಟೆಲಿಕಾಂ ಸಂಸ್ಥೆಯಾಗಿದೆ. ಏರ್ಟೆಲ್ ತನ್ನ ಸೇವೆಗಳನ್ನು ಹಳ್ಳಿ, ಪಟ್ಟಣ,ನಗರ ಎಲ್ಲೆಡೆ ವಿಸ್ತರಿಸಿಕೊಂಡಿದ್ದು, 2G, 4G ಹಾಗೂ 5G ಸೇವೆಗಳನ್ನು ಕೂಡ ನೀಡಲಾಗುತ್ತಿದೆ.

ಇನ್ನೂ ಕೂಡ ಭಾರತದಲ್ಲಿ ಕೀಪ್ಯಾಡ್ ಮೊಬೈಲ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ, ಕರೆಗಳಿಗೆ ಮಾತ್ರ ಸಿಮ್ ಬಳಸುವ ಗ್ರಾಹಕರಿಗೂ ಏರ್ಟೆಲ್ ವಿಶೇಷ ಯೋಜನೆಗಳನ್ನು ಪರಿಚಯ ಮಾಡಿದೆ.

84 ದಿನಗಳ ವ್ಯಾಲಿಡಿಟಿ ರಿಚಾರ್ಜ್ ಪ್ಲಾನ್‌

ಏರ್ಟೆಲ್ ಇದೀಗ ವಿವಿಧ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಹಲವು ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ಗಳನ್ನು ಈಗ ಏರ್ಟೆಲ್ ಬಿಡುಗಡೆ ಮಾಡಿದೆ. ಅವುಗಳ ಮೈಟಿ ಈ ಕೆಳಗೆ ಇದೆ.

₹469 ಏರ್ಟೆಲ್ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್

ಈ ಪ್ಲಾನ್ ವಿಶೇಷವಾಗಿ ಡೇಟಾ ಬಳಸದೇ, ಕರೆಗಳಿಗೆ ಮಾತ್ರ ಸಿಮ್ ಬಳಸುವವರಿಗೆ ಸೂಕ್ತವಾಗಿದೆ.

ಈ ಯೋಜನೆಯ  ಸೌಲಭ್ಯಗಳು

  • 84 ದಿನಗಳ ವ್ಯಾಲಿಡಿಟಿ
  • ಅನ್ಲಿಮಿಟೆಡ್ ವಾಯ್ಸ್ ಕಾಲ್‌ಗಳು
  • ಒಟ್ಟು 900 SMS
  • ಡೇಟಾ ಸೌಲಭ್ಯ ಇಲ್ಲ
₹799 ಏರ್ಟೆಲ್ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್

ಡೇಟಾ ಹಾಗೂ ಕರೆ ಎರಡನ್ನೂ ಸಮರ್ಪಕವಾಗಿ ಬಳಸುವವರಿಗೆ ಈ ಪ್ಲಾನ್ ಉಪಯುಕ್ತವಾಗಿದೆ.

ಈ ಪ್ಲಾನ್‌ನ ಸೌಲಭ್ಯಗಳು

  • 77 ದಿನಗಳ ವ್ಯಾಲಿಡಿಟಿ
  • ಅನ್ಲಿಮಿಟೆಡ್ ಕರೆಗಳು
  • ಪ್ರತಿದಿನ 1.5GB ಡೇಟಾ
  • ಪ್ರತಿದಿನ 100 SMS
  • 30 ದಿನಗಳ ಫ್ರೀ ಹಲೋ ಟ್ಯೂನ್
₹859 ಏರ್ಟೆಲ್ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್

84 ದಿನಗಳ ದೀರ್ಘಾವಧಿಯೊಂದಿಗೆ ಡೇಟಾ ಬೇಕೆಂದರೆ, ಈ ಪ್ಲಾನ್ ಒಳ್ಳೆಯ ಆಯ್ಕೆ.

  • 84 ದಿನಗಳ ವ್ಯಾಲಿಡಿಟಿ
  • ಅನ್ಲಿಮಿಟೆಡ್ ವಾಯ್ಸ್ ಕಾಲ್
  • ಪ್ರತಿದಿನ 1.5GB ಡೇಟಾ
  • ಪ್ರತಿದಿನ 100 SMS
  • 30 ದಿನಗಳ ಫ್ರೀ ಹಲೋ ಟ್ಯೂನ್
₹979 ಏರ್ಟೆಲ್ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್

ಹೆಚ್ಚು ಡೇಟಾ ಮತ್ತು ಹೆಚ್ಚುವರಿ ಸೌಲಭ್ಯಗಳನ್ನು ಬಯಸುವ ಗ್ರಾಹಕರಿಗಾಗಿ ಈ ಪ್ಲಾನ್ ವಿನ್ಯಾಸಗೊಳಿಸಲಾಗಿದೆ.

  • 84 ದಿನಗಳ ವ್ಯಾಲಿಡಿಟಿ
  • ಅನ್ಲಿಮಿಟೆಡ್ ಕರೆಗಳು
  • ಪ್ರತಿದಿನ 2GB ಡೇಟಾ
  • ಪ್ರತಿದಿನ 100 SMS
  • 84 ದಿನಗಳ OTT ಸಬ್ಸ್ಕ್ರಿಪ್ಷನ್
  • ಅನ್ಲಿಮಿಟೆಡ್ 5G ಡೇಟಾ ಸೌಲಭ್ಯ

ರಿಚಾರ್ಜ್ ಅನ್ನು ಮಾಡಿಸುವುದು ಹೇಗೆ?

ಏರ್ಟೆಲ್ ಗ್ರಾಹಕರಿಗೆ ಇನ್ನೂ ಹಲವಾರು ರಿಚಾರ್ಜ್ ಯೋಜನೆಗಳು ಲಭ್ಯವಿವೆ. ನೀವು ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಈಗ  ನಿಮ್ಮ ಮೊಬೈಲ್‌ನಲ್ಲಿ Airtel Thanks App ಓಪನ್ ಮಾಡಿ. ಅಲ್ಲಿ ನಿಮಗೆ ಲಭ್ಯವಿರುವ ಎಲ್ಲಾ ಹೊಸ ಮತ್ತು ಹಳೆಯ ರಿಚಾರ್ಜ್ ಪ್ಲಾನ್‌ಗಳನ್ನು ಚೆಕ್ ಮಾಡಿಕೊಂಡು ನೀವು ರಿಚಾರ್ಜ್ ಮಾಡಿಕೊಳ್ಳಬಹುದು.

WhatsApp Float Button

Leave a Comment

error: Content is protected !!