Join WhatsApp Group Join Telegram Group

Gruhalakshmi Yojane Amount Credit: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಈಗಲೇ ಖಾತೆಯನ್ನು ಚೆಕ್ ಮಾಡಿ.

Gruhalakshmi Yojane Amount Credit: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಈಗಲೇ ಖಾತೆಯನ್ನು ಚೆಕ್ ಮಾಡಿ.

ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತಹ ಕಾಂಗ್ರೆಸ್ ಸರ್ಕಾರವು ನೀಡಿರುವಂತಹ 5 ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಪ್ರಚಲಿತದಲ್ಲಿ ಇರುವಂತಹ ಮಹತ್ವದ ಯೋಜನೆ ಯೋಜನೆಯೆಂದರೆ ಅದು ಗೃಹಲಕ್ಷ್ಮಿ ಯೋಜನೆ. ಈಗ ಈ ಒಂದು ಯೋಜನೆಯ ಮೂಲಕ ನೀವು ಪ್ರತಿ ತಿಂಗಳು 2000 ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಪಡೆದುಕೊಳ್ಳಬಹುದು.

Gruhalakshmi Yojane Amount Credit

ಅಷ್ಟೇ ಅಲ್ಲದೆ ಈಗ ಮಹಿಳೆಯರು ಈ ಒಂದು ಹಣವನ್ನು ತಮ್ಮ ದಿನನಿತ್ಯದ ಖರ್ಚುಗಳಿಗೆ ಹಾಗೂ ಮಕ್ಕಳ ಶಿಕ್ಷಣ ಹಾಗೂ ಇನ್ನೂ ಹಲವಾರು ರೀತಿಯ ಖರ್ಚುಗಳಿಗೆ ಬಳಕೆಯನ್ನು ಮಾಡಿಕೊಳ್ಳುತ್ತಾ ಇದ್ದಾರೆ. ಅದೇ ರೀತಿಯಾಗಿ ಈಗ ಈ ಒಂದು ಯೋಜನೆ ಮುಖ್ಯ ಉದ್ದೇಶವೂ ಕೂಡ ಆಗಿತ್ತು. ಅಂದರೆ ಮಹಿಳೆಯರನ್ನು ಸಬಲೀಕರಣರನ್ನಾಗಿ ಮಾಡುವುದು ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಅದರಂತೆ ಈಗ ಈ ಒಂದು ಯೋಜನೆ ಮೂಲಕ ಈಗ ಈ ಒಂದು ಮಹಿಳೆಯರಿಗೆ ಸ್ವಾವಲಂಬನೆ ಜೀವನ ರೂಪಿಸಿಕೊಳ್ಳಲು ಸಹಾಯ ಮಾಡುತ್ತಾ ಇದೆ.

ಅದೇ ರೀತಿಯಾಗಿ ಈಗ ಈ ಒಂದು ಯೋಜನೆ ಅಡಿಯಲ್ಲಿ ಸುಮಾರು 1.27 ಕೋಟಿಗಿಂತ ಹೆಚ್ಚು ಗೃಹಲಕ್ಷ್ಮಿ ಫಲಾನುಭವಿಗಳನ್ನು ಹೊಂದಿದ್ದು. ಈಗ ಈ ಒಂದು ಯೋಜನೆಗೆ ಸಂಬಂಧಪಟ್ಟಂತೆ 23ನೇ ಕಂತಿನ ಹಣವು ನವೆಂಬರ್ 28 ರಂದು ಪ್ರತಿಯೊಬ್ಬರ ಖಾತೆಗಳಿಗೆ ಜಮಾ ಆಗಿದ್ದು. ಈಗ ಪ್ರತಿಯೊಬ್ಬ ಮಹಿಳೆಯರು ಈಗ ನೀವು ಕೂಡ ನಿಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಿ. ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಈ ಒಂದು ಹಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು.

ಗೃಹಲಕ್ಷ್ಮಿ ಯೋಜನೆಯ ಮಾಹಿತಿ

ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ನೀಡಿರುವಂತಹ ಐದು ಗ್ಯಾರಂಟಿ ಯೋಜನೆಗಳಲ್ಲಿ ಈಗ ಈ ಒಂದು ಗೃಹಲಕ್ಷ್ಮಿ ಯೋಜನೆಯು ಕೂಡ ಒಂದು. ಈಗ ಈ ಒಂದು ಯೋಜನೆ ಮೂಲಕ ಪ್ರತಿ ತಿಂಗಳು ಮಹಿಳೆಯರ ಖಾತೆಗಳಿಗೆ ಸರ್ಕಾರ ಹಣವನ್ನು ನೇರವಾಗಿ ಜಮಾ ಮಾಡುತ್ತಾ ಇತ್ತು. ಅದರಂತೆ ಈಗ ಬಾಕಿ ಇರುವಂತಹ ಅಂದರೆ 23ನೇ ಕಂತಿನ ಹಣವನ್ನು ಈಗ ನವೆಂಬರ್ 28ರಂದು ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಈಗ ಬಿಡುಗಡೆ ಮಾಡಿದ್ದು. ಈಗ ಈ ಒಂದು ಕಂತಿನ ಹಣವು ಕೂಡ ನಿಮ್ಮ ಖಾತೆಗೆ ಜಮಾ ಆಗಿದೆ ಇಲ್ಲವೇ ಎಂಬುದರ ಮಾಹಿತಿ ಪಡೆಯಲು ನಮ್ಮ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಅಂದರೆ ಕೊನೆಯವರೆಗೂ ಓದಿಕೊಳ್ಳಿ.

ಅದೇ ರೀತಿಯಾಗಿ ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗಾಗಲೇ ಸಾಕಷ್ಟು ಕಂತಿನ ಹಣಗಳು ಅಂದರೆ ಸುಮಾರು 3 ಕಂತಿನ ಹಣಗಳು ಪೆಂಡಿಂಗ್ ಇದ್ದು. ಆ ಒಂದು ಹಣಗಳನ್ನು ಈಗ  ಡಿಸೆಂಬರ್ ಮೊದಲ ವಾರದಲ್ಲಿ ಅಥವಾ ಡಿಸೆಂಬರ್ ಅಂತ್ಯದೊಳಗಾಗಿ ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಒಟ್ಟಾರೆಯಾಗಿ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಸರ್ಕಾರವು ನೀಡಿದೆ. ಆದರೆ ಈಗ ಸರ್ಕಾರ ಹಿಂದಿನಿಂದಲೂ ಕೂಡ ಈ ಒಂದು ಮಾಹಿತಿ ನೀಡುತ್ತಾ ಇದೆ. ಆದರೆ ಇದುವರೆಗೂ ಕೂಡ ಸರಿಯಾದ ಸಮಯಕ್ಕೆ ಈ ಒಂದು ಯೋಜನೆಯ ಕಂತಿನ ಹಣಗಳನ್ನು ಬಿಡುಗಡೆ ಮಾಡಿಲ್ಲ.

ಆದರಿಂದ ಪ್ರತಿಯೊಬ್ಬ ಮಹಿಳೆಯರೂ ಕೂಡ ಈಗ ಈ ಒಂದು ಗೃಹಲಕ್ಷ್ಮಿ ಯೋಜನ ಹಣವು ಜಮಾ ಆಗುವರೆಗೆ  ಎಲ್ಲರೂ ಕೂಡ ಕಾದು ಕುಳಿತುಕೊಳ್ಳುವುದು ಉತ್ತಮ. ಅಷ್ಟೇ ಅಲ್ಲದೆ ಈಗಾಗಲೇ ಪೆಂಡಿಂಗ್ ಇರುವಂತಹ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣದ ಬಗ್ಗೆ ಈಗ ಮಹಿಳೆಯರು ಸಾಕಷ್ಟು ಆಕ್ರೋಶವನ್ನು ಸರ್ಕಾರದ ವಿರುದ್ಧ ವ್ಯಕ್ತಪಡಿಸುತ್ತಾ ಇದ್ದಾರೆ. ಈಗ ನೀವು ಕೂಡ ನಿಮ್ಮ ಖಾತೆಗೆ ಈ ಒಂದು ಗೃಹಲಕ್ಷ್ಮಿ ಹಣವು ಜಮಾ ಆಗಿದೆ ಇಲ್ಲವೇ ಎಂಬುದರ ಮಾಹಿತಿ ಪಡೆಯಬೇಕಾ ಹಾಗಿದ್ದರೆ ಈ ಕೆಳಗಿನ ಹಂತಗಳನ್ನು ನೀವು ಅನುಸರಿಸಬೇಕಾಗುತ್ತದೆ.

ಗೃಹಲಕ್ಷ್ಮಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಈಗ ಗೃಹಲಕ್ಷ್ಮಿ ಯೋಜನೆಯ ಹಣದ  ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಲು ನೀವು ಕಡ್ಡಾಯವಾಗಿ ನಾವು ಈ ಕೆಳಗೆ ತಿಳಿಸಿರುವ ಪ್ರತಿಯೊಂದು ಹಂತಗಳನ್ನು ಅನುಸರಿಸಿದರೆ ನಿಮ್ಮ ಖಾತೆಗೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿದೆ ಇಲ್ಲವೇ  ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು.

  • ಮೊದಲಿಗೆ ನೀವು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ ಕರ್ನಾಟಕ DBT ಎಂಬ ಅಪ್ಲಿಕೇಶನ್ ಅನ್ನು ಮೊದಲಿಗೆ ಡೌನ್ಲೋಡ್ ಮಾಡಿಕೊಳ್ಳಿ.
  • ಆನಂತರ ನೀವು ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಎಂಟರ್ ಮಾಡಿ.
  • ಹಾಗೆ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರೋ ಮೊಬೈಲ್ ನಂಬರ್ ಗೆ ಬರುವ ಓಟಿಪಿ ಅನ್ನು ಅಲ್ಲಿ ಎಂಟರ್ ಮಾಡಿ.
  • ಆನಂತರ ನೀವು ನಿಮ್ಮ ನೆನಪಿನಲ್ಲಿ ಉಳಿಯುವಂತ ನಾಲ್ಕು ಅಂಕಿಯ ಒಂದು MPIN ಅನ್ನು ಕ್ರಿಯೇಟ್ ಮಾಡಿಕೊಂಡು ಲಾಗಿನ್ ಮಾಡಿಕೊಳ್ಳಿ.
  • ಆನಂತರ ಅದರಲ್ಲಿ ನೀವು ಪೇಮೆಂಟ್ ಸ್ಟೇಟಸ್ನ ಮೇಲೆ ಕ್ಲಿಕ್ ಮಾಡಿಕೊಂಡು ಮುಂದುವರೆಯಿರಿ.
  • ಆನಂತರ ಅದರಲ್ಲಿ ನೀವು ಇದುವರೆಗೂ ಸರಕಾರದ ಕಡೆಯಿಂದ ಪಡೆದಿರುವಂತಹ ಸಂಪೂರ್ಣ ಯೋಜನೆಗಳ ಮಾಹಿತಿ ಅದರಲ್ಲಿ ದೊರೆಯುತ್ತದೆ. ಅದರಲ್ಲಿ ನೀವು ಗೃಹಲಕ್ಷ್ಮಿ ಯೋಜನೆಯ ಮೇಲೆ ಕ್ಲಿಕ್ ಮಾಡಿ.
  • ಆನಂತರ ನೀವು ಅದರಲ್ಲಿ ಇದುವರೆಗೂ ಕೂಡ ನಿಮಗೆ ಗೃಹಲಕ್ಷ್ಮಿ ಯೋಜನೆ ಜಮಾ ಆಗಿರುವುದರ ಬಗ್ಗೆ ಸಂಪೂರ್ಣ ಕಂತುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.
WhatsApp Float Button

Leave a Comment

error: Content is protected !!