Join WhatsApp Group Join Telegram Group

Gruhalakshmi Yojane Loan Bank Update News: ಗೃಹಲಕ್ಷ್ಮಿ ಮಹಿಳಾ ಬ್ಯಾಂಕ್ ಯೋಜನೆ ತಿಂಗಳಿಗೆ 200 ರೂ ಹೂಡಿಕೆ ಮಾಡಿ 3 ಲಕ್ಷದವರೆಗೆ ಸಾಲ ಪಡೆಯಿರಿ. ಇಲ್ಲಿದೆ ನೋಡಿ  ಮಾಹಿತಿ.

Gruhalakshmi Yojane Loan Bank Update News: ಗೃಹಲಕ್ಷ್ಮಿ ಮಹಿಳಾ ಬ್ಯಾಂಕ್ ಯೋಜನೆ ತಿಂಗಳಿಗೆ 200 ರೂ ಹೂಡಿಕೆ ಮಾಡಿ 3 ಲಕ್ಷದವರೆಗೆ ಸಾಲ ಪಡೆಯಿರಿ. ಇಲ್ಲಿದೆ ನೋಡಿ  ಮಾಹಿತಿ.

ಈಗ ನಮ್ಮ ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಪ್ರಚಲಿತದಲ್ಲಿರುವಂತ ಯೋಜನೆ ಅಂದರೆ ಗೃಹಲಕ್ಷ್ಮಿ ಯೋಜನೆ. ಈಗ ಈ ಒಂದು ಯೋಜನೆಯ ಮೂಲಕ ಈಗ ಗೃಹಲಕ್ಷ್ಮಿ ಮಹಿಳಾ ಸಹಕಾರಿ ಸಂಘ ಯೋಜನೆಗಳನ್ನು ಮತ್ತೊಂದು ಹೊಸ ಯೋಜನೆ ಬಿಡುಗಡೆ ಮಾಡುತ್ತಾ ಇದ್ದು. ಈಗ ಎಲ್ಲರೂ ಕೂಡ ಈ ಒಂದು ಬ್ಯಾಂಕ್ ಮೂಲಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

Gruhalakshmi Yojane Loan Bank Update News

ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ 1.24 ಕೋಟಿ ಫಲಾನುಭವಿಗಳಿಗೆ ಮಾಸಿಕವಾಗಿ 2000 ಹಣವನ್ನು ನೀಡುತ್ತಾ ಬರುತ್ತಾ ಇದೆ. ಅದರಂತೆ ಈಗ ಈ ಒಂದು ಗೃಹಲಕ್ಷ್ಮಿ ಬ್ಯಾಂಕ್ ಅಡಿಯಲ್ಲಿ ಈಗ ಪ್ರತಿ ತಿಂಗಳೂ ನೀವು 200 ರೂಪಾಯಿಗಳ ಉಳಿತಾಯವನ್ನು ಮಾಡುವುದರ ಮೂಲಕ 3 ಲಕ್ಷದವರೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ಈಗ ಈ ಒಂದು ಉಪಕ್ರಮವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆಯುತ್ತಾ ಇದ್ದು. ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆಯಬಹುದು.

ಈಗ ನೀವು ಕೂಡ ಈ ಒಂದು ಬ್ಯಾಂಕಿನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಈ ಒಂದು ಯೋಜನೆ ಉದ್ದೇಶ ಅರ್ಹತೆಗಳು, ಸಾಲ ಸೌಲಭ್ಯ ಮತ್ತು ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ಇದೆ.

ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಮಾಹಿತಿ

ಈಗ ಈ ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕು ಯೋಜನೆ ನಮ್ಮ ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಖ್ಯ ಉಪಕ್ರಮವಾಗಿದೆ. ಈಗ ಗೃಹಲಕ್ಷ್ಮಿ ಯೋಜನೆ 1.24 ಕೋಟಿ ಫಲಾನುಭವಿಗಳಿಗೆ ಮಾಸಿಕವಾಗಿ 2000 ಹಣವನ್ನು ನೀಡುವುದು ಹಾಗೆ ಹೊಸ ಆರ್ಥಿಕ ಸಬಲೀಕರಣದ ಮಾರ್ಗವನ್ನು ತೋರಿಸುವುದು ಈ ಒಂದು ಯೋಜನೆ ಮುಖ್ಯ ಗುರಿಯಾಗಿದೆ.

ಈ ಒಂದು ಬ್ಯಾಂಕ್ ಸಂಪೂರ್ಣ ಮಹಿಳಾ ನೇತೃತ್ವದ ಸಹಕಾರ ಸಂಘವಾಗಿದ್ದು. ಸದಸ್ಯರೆ ಹಣವನ್ನು ಹೂಡಿಕೆ ಮಾಡಿ ಸಾಲವನ್ನು ಪಡೆಯುವ ವ್ಯವಸ್ಥೆಯನ್ನು ಇದು ಹೊಂದಿದೆ. ಅಷ್ಟೇ ಅಲ್ಲದೆ ಈ ಒಂದು ಯೋಜನೆ ಅಡಿಯಲ್ಲಿ 2026ರಲ್ಲಿ 50 ಲಕ್ಷ ಮಹಿಳೆಯರಿಗೆ ತಲುಪುವ ಗುರಿಯನ್ನು ಇದು ಹೊಂದಿದೆ. ಈಗ ಮಹಿಳೆಯರು ಈ ಒಂದು ಹಣವನ್ನು ಬಳಕೆ ಮಾಡಿಕೊಂಡು ಸ್ವಂತ ವ್ಯಾಪಾರವನ್ನು ಪ್ರಾರಂಭ ಮಾಡಬಹುದಾಗಿದೆ.

ಅದೇ ರೀತಿಯಾಗಿ ನೀವು ತೆಗೆದುಕೊಂಡಂತಹ ಸಾಲಕ್ಕೆ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಂದರೆ 7 ರಿಂದ 9% ಬಡ್ಡಿ ದರದಲ್ಲಿ ಈಗ ನಿಮಗೆ ಈಗ ಈ ಒಂದು ಬ್ಯಾಂಕಿನ ಮೂಲಕ 3 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.

ಅರ್ಹತೆಗಳು ಏನು?

  • ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
  • ಆನಂತರ ಅವರು ಪ್ರತಿ ತಿಂಗಳು 200 ರೂಪಾಯಿ ಹಣವನ್ನು ಉಳಿತಾಯ ಮಾಡಬೇಕು.
  • ಹಾಗೆ ಮೊದಲಿಗೆ ಒಂದು ಬಾರಿ 1000 ಹಣವನ್ನು ನೀಡಿ ಶೇರನ್ನು ಖರೀದಿ ಮಾಡಬೇಕು.
  • ಹಾಗೆ ಅವರು ಸತತವಾಗಿ ಆರು ತಿಂಗಳು ಉಳಿತಾಯ ಮಾಡಿದ ನಂತರ ಸಾಲಕ್ಕೆ ಅರ್ಹತೆ ಪಡೆಯುತ್ತಾರೆ.
  • ಹಾಗೆ ಅವರು 30,000 ದಿಂದ 3 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.
  • ಇದಕ್ಕೆ ಯಾವುದೇ ರೀತಿಯಾದಂತಹ ಗ್ಯಾರಂಟಿಯನ್ನು ನೀಡುವ ಅವಶ್ಯಕತೆ ಇಲ್ಲ.

ಸಾಲವನ್ನು ಪಡೆಯುವುದು ಹೇಗೆ?

  • ನೀವು ಸಾಲವನ್ನು ಪಡೆದುಕೊಳ್ಳಲು ಮೊದಲು ಗೃಹಲಕ್ಷ್ಮಿ ಫಲಾನುಭವಿಗಳಾಗಿ ನೊಂದಣಿಯನ್ನು ಮಾಡಿಕೊಂಡಿದ್ದೀರಿ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಆನಂತರ ನೀವು ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ತಾಲೂಕು ಮಹಿಳಾ ಕಲ್ಯಾಣ ಕಚೇರಿಗೆ ತೆರಳಿ ಸದಸ್ಯತ್ವ ಫಾರ್ಮನ್ನು ಪಡೆದುಕೊಳ್ಳಿ.
  • ಆನಂತರ ನೀವು 1000 ಹಣವನ್ನು ನೀಡಿ  ಶೇರು ಫಾರಂ ಭರ್ತಿ ಮಾಡಿ ಗುರುತಿನಿಂದ ದಾಖಲೆಗಳನ್ನು ನೀಡಿ.
  • ಆನಂತರ ನೀವು ಪ್ರತಿ ತಿಂಗಳು 200 ಹಣವನ್ನು ಉಳಿತಾಯ ಪ್ರಾರಂಭ ಮಾಡಿ.
  • ನೀವು ಉಳಿತಾಯ ಮಾಡಿದ ಆರು ತಿಂಗಳ ಕಳೆದ ನಂತರ ಸಾಲಕ್ಕೆ ನೇರವಾಗಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
WhatsApp Float Button

Leave a Comment

error: Content is protected !!