Join WhatsApp Group Join Telegram Group

PM Yashavini Scholarship: ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.

PM Yashavini Scholarship: ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.

ಈಗ ಶಿಕ್ಷಣದ ಹಾದಿಯಲ್ಲಿ ಹಣದ ಕೊರತೆಯಿಂದ ತಡೆಯಾಗುವ ಯುವಕರು ನಮ್ಮ ದೇಶದಲ್ಲಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅರ್ಧದಲ್ಲಿ ಈಗ ಬಿಡುತ್ತಾ ಇದ್ದಾರೆ. ಅಂದರೆ ವಿಶೇಷವಾಗಿ ಓಬಿಸಿ, ಎಬಿಸಿ ಮತ್ತು ಡಿಎಂಟಿ ಸಮುದಾಯಗಳ ವಿದ್ಯಾರ್ಥಿಗಳಿಗೆ ಈಗ ಈ ಒಂದು ಸಮಸ್ಯೆಗೆ ತೀವ್ರವಾಗಿ ಕಾಡುತ್ತಾ ಇದೆ. ಆದರೆ ಈ ಒಂದು ಸ್ಕಾಲರ್ಶಿಪ್ ನ ಅಡಿಯಲ್ಲಿ ಈಗ ನೀವು ಅರ್ಜಿ ಸಲ್ಲಿಕೆ ಮಾಡಿಕೊಂಡು ಈಗ 3 ಲಕ್ಷದವರೆಗೆ ವಿದ್ಯಾರ್ಥಿ ವೇತನವನ್ನು ಈಗ  ಪಡೆದುಕೊಳ್ಳಬಹುದು.

PM Yashavini Scholarship

ಯಾವ ವಿದ್ಯಾರ್ಥಿಗಳಿಗೆ 3 ಲಕ್ಷದವರೆಗೆ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದೀರಾ ಅಂತವರು ಈಗ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ. ಏಕೆಂದರೆ ನಾವು ಇದರಲ್ಲಿ ಅರ್ಜಿ ಸಲ್ಲಿಸಲು ಅರ್ಹತೆಗಳು ಏನು? ಬೇಕಾಗುವ ದಾಖಲೆಗಳು ಏನು ಹಾಗೂ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಕೆ  ಮಾಡಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಗಾಗಿ ಒಂದು ಲೇಖನದಲ್ಲಿ ಇದೆ.

ಯೋಜನೆಯ ಉದ್ದೇಶ ಏನು?

ಈ ಒಂದು ವಿದ್ಯಾರ್ಥಿ ವೇತನದ ಮುಖ್ಯ ಉದ್ದೇಶವು ಏನೆಂದರೆ ಈಗ ಹಿಂದುಳಿದ ವರ್ಗಗಳ ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಅಲೆಮಾರಿ ಬುಡಕಟ್ಟು ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು. ಈ ಒಂದು ಯೋಜನೆ ಮುಖ್ಯ ಉದ್ದೇಶವು ಆಗಿದೆ. ಈಗ ಈ ಒಂದು ಕೇಂದ್ರೀಯ ವಲಯ ಯೋಜನೆಯು ಪೂರ್ವದಲ್ಲಿ ನಡೆಯುತ್ತಿದ್ದ ಪೋಸ್ಟ್ ಮ್ಯಾಟ್ರಿಕ್ ಸ್ಕಾಲರ್ಶಿಪ್‌ಗಳನ್ನು ಸಯೋಜಿಸಿ ಹೊಸ ರೂಪವನ್ನು ಪಡೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅದೇ ರೀತಿಯಾಗಿ ಈಗ ವಿಶೇಷವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಈಗ ಈ ವಿದ್ಯಾರ್ಥಿ ವೇತನದ ಮೂಲಕ ಆರ್ಥಿಕ ನೆರವು ನೀಡಿ. ಅವರಿಗೆ ಶಾಲಾ ಶುಲ್ಕ, ವಸತಿ ಮತ್ತು ತಂತ್ರಜ್ಞಾನ ಸೌಲಭ್ಯಗಳನ್ನು ಈಗ ನೀಡಲಾಗುತ್ತಿದೆ.

ಅರ್ಹತೆಗಳು ಏನು?

  • ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಭಾರತದ ಕಾಯಂ ನಿವಾಸಿ ಆಗಿರಬೇಕು.
  • ಹಾಗೆಯೆ ವಿದ್ಯಾರ್ಥಿ ಈಗ ಹಿಂದಿನ ಶೈಕ್ಷಣಿಕ ವರ್ಷದಲ್ಲಿ 50%  ಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿರಬೇಕು.
  • ಆನಂತರ ಪೋಷಕರ ವಾರ್ಷಿಕ ಆದಾಯವು 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಹಾಗೆ ಅವರು ಸರ್ಕಾರಿ ಅಥವಾ ಅನುದಾನಿತ ಶಾಲೆಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಾ ಇರಬೇಕು.

ದೊರೆಯುವ ವಿದ್ಯಾರ್ಥಿ ವೇತನವೆಷ್ಟು?

ಈಗ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿದಂತ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಈಗ ಸರಿ ಸುಮಾರು 3 ಲಕ್ಷದವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಈ ಒಂದು ವಿದ್ಯಾರ್ಥಿ ವೇತನ ಅವರ ಕೋರ್ಸ್ಗಳ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ಶೈಕ್ಷಣಿಕ ಅಂಕ ಪಟ್ಟಿಗಳು
  • ರೇಷನ್ ಕಾರ್ಡ್
  • ಮೊಬೈಲ್ ನಂಬರ್
  • ಇಮೇಲ್ ಐಡಿ

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ನಾವು ಈ ಕಳೆದ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಬೇಕಾಗುತ್ತದೆ.
  • ಆನಂತರ ಅದರಲ್ಲಿ ನೀವು ಮೊದಲ ಬಾರಿ ನೋಂದಣಿ  ಮಾಡಬೇಕಾದರೆ ಈಗ ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ ನ ಮೂಲಕ ನೀವು ನೋಂದಣಿಯನ್ನು ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ನೀವು ಅದರಲ್ಲಿ ರಿಜಿಸ್ಟ್ರೇಷನ್ ಐಡಿ ಮತ್ತು ಪಾಸ್ವರ್ಡ್ ಅನ್ನು ಬಳಕೆ ಮಾಡಿಕೊಂಡು ಅಲ್ಲಿ ಲಾಗಿನ್ ಆಗಬೇಕಾಗುತ್ತದೆ.
  • ಆನಂತರ ಅದರಲ್ಲಿ ಪಿಎಂ ಯಶಸ್ವಿನಿ ಯೋಜನೆ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು.
  • ಆನಂತರ ಅದರಲ್ಲಿ ನೀವು ನಿಮ್ಮ ಶೈಕ್ಷಣಿಕ ದಾಖಲೆಗಳು ಹಾಗೂ ವೈಯಕ್ತಿಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
  • ಆನಂತರ ನೀವು ಭರ್ತಿ ಮಾಡಿದ ದಾಖಲೆ ಸರಿಯಾಗಿದ್ದರೆ ಅರ್ಜಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

LINK : Apply Now 

WhatsApp Float Button

Leave a Comment

error: Content is protected !!