Join WhatsApp Group Join Telegram Group

Atal Pension Yojane: ಪ್ರತಿ ತಿಂಗಳ 5,000 ಪಿಂಚಣಿ ಹಣ! ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

Atal Pension Yojane: ಪ್ರತಿ ತಿಂಗಳ 5,000 ಪಿಂಚಣಿ ಹಣ! ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.

ಈಗ ನಮ್ಮ ಕರ್ನಾಟಕದ ಕಡಿಮೆ ಆದಾಯದ ಕುಟುಂಬಗಳಿಗೆ ಕೇಂದ್ರ ಸರಕಾರದಿಂದ ಬಂದಿರುವ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಈ ಒಂದು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಈಗ 210 ರಂತ ಸಣ್ಣ ಮಾಸಿಕ ಹೂಡಿಕೆಯೊಂದಿಗೆ ಈಗ ನೀವು 60 ವರ್ಷ ವಯಸ್ಸಿನ ನಂತರ ಪ್ರತಿ ತಿಂಗಳು 5000 ಮಾಸಿಕ ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ. ಇದರ ಮೂಲಕ ಈಗ ಇಳಿ ವಯಸ್ಸಿನಲ್ಲಿ ಈಗ ಆರ್ಥಿಕ ಸ್ಥಿರತೆಯನ್ನು ನೀವು ಖಾತರಿ ಪಡಿಸುವುದು.

Atal Pension Yojane

ಹಾಗೆ ಈ ಒಂದು ಯೋಜನೆಗೆ ಸೇರ್ಪಡೆ ಪ್ರಕ್ರಿಯೆಗೆ ಅತ್ಯಂತ ಸರಳವಾಗಿದ್ದು. ಈಗ 7.65 ಕೋಟಿಗೆ ಹೆಚ್ಚು ಚೆಂದದಾರರನ್ನು ಹೊಂದಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಈಗ ಈ ಒಂದು ಯೋಜನೆ 2015ರಲ್ಲಿ ಜೂನ್ ನಲ್ಲಿ ಪ್ರಾರಂಭವಾಗಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನಡೆಸುತ್ತಿರುವಂತಹ ಯೋಜನೆಯಾಗಿದೆ. ಇದರಲ್ಲಿ ಈಗ ಶ್ರಮಿಕರು ದಿನಗೂಲಿ ಕಾರ್ಮಿಕರು ಮತ್ತು ಖಾಸಗಿ ಉದ್ಯೋಗಿಗಳಿಗೆ ವಿಶೇಷವಾಗಿ ಉಪಯುಕ್ತವಾಗುತ್ತ ಇದೆ.

ಅಷ್ಟೇ ಅಲ್ಲದೆ ಈಗ ಹಿಂದಿನ ವರ್ಷಗಳಲ್ಲಿ ಈ ಒಂದು ಯೋಜನೆಯ 50 ಲಕ್ಷಕ್ಕೂ ಹೆಚ್ಚು ಕುಟುಂಬ ಗಳಿಗೆ ಈಗ ಭದ್ರತೆಯನ್ನು ನೀಡುತ್ತಾ ಇದ್ದು. ಈಗ ಸಂಗಾತಿಗೆ ಕೂಡ ಪಿಂಚಣಿ ಮುಂದುವರಿಸುವ ಸೌಲಭ್ಯದೊಂದಿಗೆ ಕುಟುಂಬದ ಭವಿಷ್ಯ ವನ್ನು ಈಗ ರಕ್ಷಣೆ ಮಾಡುತ್ತಾ ಬಂದಿದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈ ಒಂದು ಲೇಖನವನ್ನು ಈಗ ಸಂಪೂರ್ಣವಾಗಿ ಓದಿಕೊಳ್ಳಿ.

ಅಟಲ್ ಪಿಂಚಣಿ ಯೋಜನೆ ಎಂದರೆ ಏನು?

ಈಗ ಅಟಲ್ ಪಿಂಚಣಿ ಯೋಜನೆ ಈಗ ಕೇಂದ್ರ ಸರ್ಕಾರದ ಒಂದು ಪ್ರಮುಖ ಹಣಕಾಸು ಸುರಕ್ಷತೆ ಕಾರ್ಯಕ್ರಮ ವಾಗಿದ್ದು. ಈಗ 18 ರಿಂದ 40 ವರ್ಷ ವಯಸ್ಸಿನ ಆದಾಯ ತೆರಿಗೆ ಪಾವತಿ ಮಾಡದೆ ಇರುವಂತಹ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು.

ಹಾಗೆ ಈ ಒಂದು ಯೋಜನೆಯ ಮೂಲಕ ಉದ್ದೇಶವೇನೆಂದರೆ ಈಗ ಕಡಿಮೆ ಆದಾಯದ ಕುಟುಂಬಗಳಲ್ಲಿ ಈಗ ವೃದ್ಧಾಪ್ಕದಲ್ಲಿ ಆರ್ಥಿಕ ಸಂಕಷ್ಟಗಳು ಬರದಂತೆ ಈಗ ಮಾಡುವುದು. ಈ ಒಂದು ಯೋಜನೆಯ ಮುಖ್ಯ ಉದ್ದೇಶವು ಆಗಿದೆ. ಅಷ್ಟೇ ಅಲ್ಲದೆ ಇದರ ಮೂಲಕ ಈಗ ಹಣಕಾಸು ಸಾಕ್ಷರತೆ ಉಳಿತಾಯದ ಅಭ್ಯಾಸ ಮತ್ತು ಕುಟುಂಬದ ಭದ್ರತೆಯನ್ನು ಉತ್ತೇಜಿಸಲಾಗುತ್ತಿದೆ.

ಅದೇ ರೀತಿಯಾಗಿ 2025ರಲ್ಲಿ ಈ ಒಂದು ಯೋಜನೆ 8 ಕೋಟಿ ಹೆಚ್ಚು ಚಂದಾದಾರರನ್ನು ಬಳಕೆ ಮಾಡಿಕೊಂಡಿದ್ದು. 50,000 ಕೋಟಿ ಹೆಚ್ಚು ಹಣವನ್ನು ಸಂಗ್ರಹಣೆ ಮಾಡಿದೆ. ಅಷ್ಟೇ ಅಲ್ಲದೆ ಇದರಲ್ಲಿ ಈಗ ವೃದ್ಯಾಪದಲ್ಲಿ ಪಿಂಚಣಿ ಪಡೆಯುವವರ ಸಂಖ್ಯೆ 60% ಕೂಡ ಹೆಚ್ಚಾಗಿದೆ. ಇದು ಕೇವಲ ಪಿಂಚಣಿ ಅಲ್ಲ ಬದಲಿಗೆ ಇಳಿಯ ವಯಸ್ಸಿನಲ್ಲಿ ನೆಮ್ಮದಿಗೆ ಬಲವಾದ ಆಧಾರವಾಗಿದ್ದು, ಖಾಸಗಿ ಉದ್ಯೋಗಿಗಳು ಮತ್ತು ಶ್ರಮಿಕರಿಗೆ ವಿಶೇಷವಾಗಿ ಉಪಯುಕ್ತವಾಗುತ್ತ ಇದೆ.

ಅರ್ಹತೆಗಳು ಏನು?

  • ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವವರು ಭಾರತೀಯ ನಾಗರಿಕರು ಆಗಿರಬೇಕು.
  • ಆನಂತರ ಅವರ ವಯಸ್ಸು 18 ರಿಂದ 40 ವರ್ಷದ ಒಳಗೆ ಇರಬೇಕು.
  • ಆನಂತರ ಅವರು ಬ್ಯಾಂಕ್ ಅಥವಾ ಅಂಚೆ ಕಚೇರಿ ಉಳಿತಾಯ ಖಾತೆಯನ್ನು ಹೊಂದಿರಬೇಕು.
  • ಆದಾಯ ತೆರಿಗೆ ಪಾವತಿ ಮಾಡುವವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹ ಇರುವುದಿಲ್ಲ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ

ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ?

  • ಈಗ ಅರ್ಜಿಯನ್ನು ಸಲ್ಲಿಕೆ ಮಾಡಲು ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಭೇಟಿಯನ್ನು ನೀಡಿ. ಅದರಲ್ಲಿ APY ಫಾರ್ಮನ್ನು ನೀವು ಪಡೆದುಕೊಳ್ಳಬೇಕಾಗುತ್ತದೆ.
  • ಆನಂತರ ನೀವು ಅದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳು ಮತ್ತು ಪಿಂಚಣಿ ಆಯ್ಕೆ ಹಾಗೂ ಪಾವತಿಯ ವಿಧಾನವನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ..
  • ಆನಂತರ ಅದಕ್ಕೆ ಬೇಕಾಗುವಂತಹ ಕೆಲವೊಂದು ಅಷ್ಟು ದಾಖಲೆಗಳನ್ನು ಈಗ ನೀವು ಸರಿಯಾದ ರೀತಿಯಲ್ಲಿ ಭೇಟಿ ಮಾಡಿ.
  • ನೀವು ಈ ಎಲ್ಲಾ ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ಈಗ ನೀವು ಕೂಡ ಈ ಒಂದು ಪಿಂಚಣಿ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಈಗ ನೀವು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ಆದರೆ ಈಗ ಮುಂದಿನ 60 ವರ್ಷಗಳ ನಂತರ ನೀವು ಪ್ರತಿ ತಿಂಗಳು 5,000 ದವರೆಗೆ ಈ ಒಂದು ಯೋಜನೆಯ ಮೂಲಕ ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ. ಈಗ ನೀವು ಕೂಡ ಹೂಡಿಕೆಯನ್ನು ಮಾಡಲು ಇಚ್ಛೆ ಪಡುತ್ತಿದ್ದರೆ ಈ ಕೂಡಲೇ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈಗ ನೀವು ಕೂಡ ಪಿಂಚಣಿಯನ್ನು ಪಡೆದುಕೊಳ್ಳಬಹುದು.

WhatsApp Float Button

Leave a Comment

error: Content is protected !!